Sunday, January 31, 2010

ಹುಚ್ಚು ಹುಡುಗನ ನೂರಾರು ಕನಸುಗಳು ಗರಿಬಿಚ್ಚಿ ಕುಣಿಯಲು


ತಿಂಗಳಿಗೊಮ್ಮೆ ಬಂದು ಹೋಗುವ ಹುಣ್ಣಿಮೆಯಾ ಚಂದಿರ ನನಗೆ ಬೇಡ ಗೆಳತಿ
ಹೃದಯದ ಭಾವನೆಗಳನ್ನು ಮನಸ್ಸಿನ ತುಡಿತ ಮಿಡಿತಗಳನ್ನು ಹಂಚಿಕೊಳ್ಳುವ ಒಲವಿನ ಗೆಳತಿ ನೀ ನನಗೆ ಬೇಕು.
ಕ್ಷಣಿಕ ತಂಪನು ನೀಡಿ ಸುರಿದು ಸುಮ್ಮನಾಗುವ ಆರ್ಭಟದ ವರುಣ ನನಗೆ ಬೇಡ ಗೆಳತಿ
ನನ್ನ ಒಡಲಾಳದ ತಲ್ಲಣಗಳ ತಣಿಸಿ ನಾ ಏಣಿಸದ ಸಿಹಿ ತಂಪನು ಉಣಿಸುವ ಮಳೆಬಿಲ್ಲಿನ ಗೆಳತಿ ನೀ ನನಗೆ ಬೇಕು
.
ನಿನ್ನ ಒಲವ ಬಯಸುವ ಗೆಳೆಯ
ಮಹೇಶ್

Tuesday, October 27, 2009

‘ಕಂಪ್ಯೂಟರ್ ಕೊಂಡ ಮೊದಲ ಕನ್ನಡ ಸಾಹಿತಿ’


ಕಂಪ್ಯೂಟರ್ ಕೊಂಡ ಮೊದಲ ಕನ್ನಡ ಸಾಹಿತಿ’ಕನ್ನಡ ತಂತ್ರಾಂಶ ಅಭಿವೃದ್ಧಿಯ ಬಗೆಗಿನ ಸರಕಾರದ ನಿರಾಸಕ್ತಿಯನ್ನು ಕಂಡು ಕೋಪಗೊಂಡ ತೇಜಸ್ವಿ ಹೇಳಿದ್ದು ಹೀಗೆ. "ಸಾಹಿತ್ಯ ಸಮ್ಮೇಳನದ ಹೆಸರಲ್ಲಿ ಕೋಟಿಗಟ್ಲೆ ವ್ಯಯಿಸುವ ಸರ್ಕಾರ ತಂತ್ರಾಂಶ ಅಭಿವೃದ್ಧಿಗೇಕೆ ಹಣ ನೀಡಬಾರದು?"ಕನ್ನಡ ತಂತ್ರಾಂಶಕ್ಕೇಕೆ ಅಷ್ಟೊಂದು ಪ್ರಾಮುಖ್ಯ ಎಂಬ ಪ್ರಶ್ನೆಗೆ: "ಕಂಪ್ಯೂಟರ್‍ನಲ್ಲಿ ಇಂಗ್ಲೀಷ್‌ನಷ್ಟೇ ಸರಳವಾಗಿ ಮತ್ತು ಸಹಜವಾಗಿ ಕನ್ನಡವನ್ನು ಬಳಸಲು ಸಾಧ್ಯವಾಗದಿದ್ದರೆ ಭಾಷೆಯನ್ನು ಉಳಿಸಲು ಸಾಧ್ಯವಿಲ್ಲ"ಎಸ್.ಎಂ.ಕೃಷ್ಣನೇತೃತ್ವದ ಮೈಕ್ರೋಸಾಫ್ಟ್ ಕಂಪೆನಿಯೊಂದಿಗೆ ತಂತ್ರಾಂಶ ಅಭಿವೃದ್ಧಿಗೆ ಒಪ್ಪಂದ ಮಾಡಿಕೊಂಡಾಗ: "ಕರ್ನಾಟಕ ಸರ್ಕಾರ ಮೈಕ್ರೋಸಾಫ್ಟ್‌ನಂತಹ ಬಹುರಾಷ್ಟ್ರೀಯ ಸಂಸ್ಥೆಗೆ ಕನ್ನಡವನ್ನು ಅಡ ಇಡುವುದು ಸರಿಯಲ್ಲ. ಭಾಷೆಗೆ ತಕ್ಕ ಹಾಗೆ ತಂತ್ರಾಂಶ ಇರಬೇಕೇ ಹೊರತು, ತಂತ್ರಾಂಶಕ್ಕೆ ತಕ್ಕ ಹಾಗೆ ಭಾಷೆ ಬದಲಾಗಬೇಕು ಎಂದರೆ ಯಾವ ನ್ಯಾಯ?"ಕನ್ನಡ ವಿಶ್ವವಿದ್ಯಾಲಯದಿಂದ ತೇಜಸ್ವಿಯವರಿಗೆ ನಾಡೋಜ ಪುರಸ್ಕಾರ ನೀಡಲು ವಿಶ್ವವಿದ್ಯಾಲಯದವರು ಸಂಪರ್ಕಿಸಿದಾಗ "ಕನ್ನಡ ತಂತ್ರಾಂಶ ಅಭಿವೃದ್ಧಿಮಾಡಿ ಅದು ನನಗೆ ನೀಡಿದ ನಾಡೋಜವಾಗುತ್ತದೆ" ಎಂದಿದ್ದರು.ಗುರುಲಿಂಗ ಕಾಪಸೆಯವರೊಂದಿಗೆ ಮಾತನಾಡುತ್ತಿದ್ದ ಮರಾಠಿ ಸಾಹಿತಿ ವಿ.ಸಾ. ಖಾಂಡೇಕರರು 'ನಿಮ್ಮ ತೇಜಸ್ವಿ ಬೇರೆ ಭಾಷೆಯ ಲೇಖಕರಿಗಿಂತ ನೂರು ವರ್ಷ ಮುಂದಿದ್ದಾರೆ' ಎಂದಿದ್ದರಂತೆ. 'ಕಂಪ್ಯೂಟರ್ ಕೊಂಡ ಮೊದಲ ಕನ್ನಡ ಸಾಹಿತಿ' ಎಂದು ಕನ್ನಡಿಗರು ಗುರುತಿಸುವ ಮೊದಲೇ, ಸುಮಾರು ಇಪ್ಪತ್ತು ವರ್ಷಗಳ ಹಿಂದೆಯೇ ಖಾಂಡೇಕರರು ತೇಜಸ್ವಿ ಸಾಹಿತ್ಯದ ಅನನ್ಯತೆಯನ್ನು ಗುರುತಿಸಿದ್ದರು!ತೇಜಸ್ವಿ: ಮಾತು ಮೂರು ಅರ್ಥ ನೂರಾರು - ‘ಕಂಪ್ಯೂಟರ್ ಕೊಂಡ ಮೊದಲ ಕನ್ನಡ ಸಾಹಿತಿ’ -ಭಾಷೆಗೆ ತಕ್ಕ ಹಾಗೆ ತಂತ್ರಾಂಶ ಇರಬೇಕೇ ಹೊರತು, ತಂತ್ರಾಂಶಕ್ಕೆ ತಕ್ಕ ಹಾಗೆ ಭಾಷೆ ಬದಲಾಗಬೇಕು ಎಂದರೆ ಯಾವ ನ್ಯಾಯ?”